ಬಳಕುಂಜೆ ಸಂತ ಪಾವ್ಲರ ದೇವಾಲಯದ ನೇತೃತ್ವದಲ್ಲಿ , ಕುಟುಂಬ ಆಯೋಗ, ಕಾರ್ಮಿಕರ ಆಯೋಗ, ಸ್ತ್ರೀಯರ ಆಯೋಗ, ಲಾಯಿಕ್ ಆಪೊಸ್ತಲಾದ್ ಆಯೋಗ ಹಾಗೂ ನೀತಿ ಮತ್ತು ಶಾಂತಿ ಆಯೋಗದ ಸಹಯೋಗದಲ್ಲಿ ಏಳು ದಿನಗಳ ಅಕ್ಯೂಪ್ರೆಶರ್ ಹಾಗೂ ಸುಜೋಕ್ ಥೆರಪಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭ ದಿನಾಂಕ 10-12-2023 ರಂದು ಬೆಳಿಗ್ಗೆ 9:30 ಗಂಟೆಗೆ ನೆರವೇರಿತು. . ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಿಬಿರದ ವೈದ್ಯರಾದ ಡಾ.ರಮೇಶ್ ಚೌಧರಿ ಮಾತನಾಡಿ ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದ , ನೈಸರ್ಗಿಕ ಚಿಕಿತ್ಸಾ ಪದ್ದತಿ. ಈ ಚಿಕಿತ್ಸೆಯಿಂದ ತುಂಬಾ ಜನರಿಗೆ ಪ್ರಯೋಜನವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂತ ಪಾವ್ಲರ ದೇವಾಲಯದ ಧರ್ಮ ಗುರುಗಳಾದ ವಂದನೀಯ ಪಾವ್ಲ್ ಸಿಕ್ವೇರ ಮಾತನಾಡಿ ನೈಸರ್ಗಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವ ಈ ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿ ಕಾರ್ಯಕ್ರಮದ ಮೇಲೆ ದೇವರ ಆಶೀರ್ವಾದ ಬೇಡಿ ಹರಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬಳಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಮತಾ ಡಿ ಪೂಂಜ ಮಾತನಾಡಿ ಆಧುನಿಕ ಯುಗದಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿರುವಾಗ ಇಂತಹ ಚಿಕಿತ್ಸೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ತಿಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಹಾಗೂ ಕುಟುಂಬ ಆಯೋಗದ ಸಂಚಾಲಕರಾಗಿರುವ ಡಾ. ಫ್ರೀಡಾ ರೊಡ್ರಿಗಸ್ , ಕಾರ್ಯದರ್ಶಿ ಶ್ರೀಮತಿ ನ್ಯಾನ್ಸಿ ಕಾರ್ಡೋಜ ಹಾಗೂ ಸರ್ವ ಆಯೋಗಗಳ ಸಂಯೋಜಕರಾಗಿರುವ ಶ್ರೀಮತಿ ಲವೀನ ಸೆರಾವೊ , ಆರೋಗ್ಯ ಆಯೋಗದ ಸಂಚಾಲಕರಾದ ಶ್ರೀಮತಿ ಜಾನೆಟ್ ರೆಬೆಲ್ಲೊ, ನೀತಿ ಮತ್ತು ಶಾಂತಿ ಆಯೋಗದ ಸಂಚಾಲಕರಾದ ಶ್ರೀಮತಿ ಮರೀನ ಡಿಸೋಜ, ಸ್ತ್ರೀ ಆಯೋಗದ ಸಂಚಾಲಕರಾದ ಶ್ರೀಮತಿ ಹೆಲೆನ್ ಡಿಸೋಜ, ಕಾರ್ಮಿಕರ ಆಯೋಗದ ಸಂಚಾಲಕರಾದ ಶ್ರೀ ರಾಜೇಶ್ ಡಿಸೋಜ ಲಾಯಿಕ್ ಆಪೊಸ್ತಲಾದಿಕ್ ಆಯೋಗದ ಸಂಚಾಲಕರ ಅನುಪಸ್ಥಿತಿಯಲ್ಲಿ ಶ್ರೀಮತಿ ಪ್ರೆಸಿಲ್ಲಾ ಡಿಸೋಜ ಹಾಜರಿದ್ದರು. ಶ್ರೀಮತಿ ನಿರ್ಮಲ ರೊಡ್ರಿಗಸ್ ಸ್ವಾಗತಿಸಿದರು. ಶ್ರೀಮತಿ ಅನಿತ ಡಿಸೋಜ ಧನ್ಯವಾದ ಸಲ್ಲಿಸಿದರು. ಶ್ರೀ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.